ಇಲಿಯಾನಾ ಡಿ ಕ್ರೂಸ್ಇವರು ಭಾರತೀಯ ನಟಿ. ಇವರು ತೆಲುಗು ಹಾಗೂ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ೧ ನವೆಂಬರ್ ೧೯೮೭ರಲ್ಲಿ ಜನಿಸಿದರು. ಇಲೀನಾ ರವರ ತವರು ಗೋವಾ ರಾಜ್ಯದ ಪಾರ್ರಾ ಎಂಬ ಊರು. ಇವರ ತಂದೆ ರೊನಾಲ್ಡೊ ಡಿ'ಕ್ರುಜ್, ತಾಯಿ ಸಮೀರಾ ಡಿ'ಕ್ರುಜ್. ಇಲೀನಾ ರವರ ಅಡ್ಡಹೆಸರು ಇಲ್ಲು ಇವರಿಗೆ ೨೦೦೬ ರಲ್ಲಿ ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ಪೋಕಿರಿ, ಜಾಲ್ಸ, ಕಿಕ್, ಜುಲಾಯಿ ಚಿತ್ರಗಳಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿ ಆದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಿಸಿದರು. ಇವರಿಗೆ ತಮ್ಮ ಚೊಚ್ಚಲ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ನಟಿ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ನಂತರ ಆಕ್ಷ್ಯನ್ ಹಾಸ್ಯಚಿತ್ರ ಫಟಾ ಪೊಸ್ಟರ್ ನಿಕ್ಳಾ ಹೀರೊ(೨೦೧೩), ಮೇ ತೇರಾ ಹೀರೊ(೨೦೧೪), ರುಸ್ತಮ್(೨೦೧೬) ಮತ್ತು ಬಾದಾಯಿಹೋ (೨೦೧೭) ಚಿತ್ರಗಳಲ್ಲಿ ನಟಿಸಿದ್ದಾರೆ. == ಆರಂಭಿಕ ಜೀವನ == ಇಲಿಯಾನಾ ಗೋವಾದ ಕ್ಯಾಥೊಲಿಕ್ ಕುಟುಂಬದಲ್ಲಿ ಮುಂಬೈಯಲ್ಲಿ ಜನಿಸಿದರು. ಅವರ ತಮ್ಮ ಬಾಲ್ಯವನ್ನು ಮುಂಬೈ ಮತ್ತು ಗೋವಾದಲ್ಲಿ ಕಳೆದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ. ಸವೆರರ ಶಾಲೆ, ಮಪುಸದಲ್ಲಿ ಪಡೆದರು . ಕಾಲೇಜು ಶಿಕ್ಷಣಕ್ಕೆ ಮುಂಬೈ ವಿಶ್ವವಿದ್ಯಾನಿಲಯ, ಮುಂಬೈನಲ್ಲಿ ಪಡೆದರು. ಇವರ ಮಾತೃ ಭಾಷೆ ಕೊಂಕಣಿ. ಆ ಸಮಯದಲ್ಲಿ, ಇವರ ಅಮ್ಮ ಕೆಲಸ ಮಾಡುತಿದ್ದ ಹೋಟೆಲ್ ವ್ಯವಸ್ಥಾಪಕ ಇವರ ಕಿರುನಗೆಯನ್ನು ನೋಡಿ ಮೋಡೆಲ್ಲಿಂಗ್ ಕ್ಷೇತ್ರಕ್ಕೆ ಹೋಗಲು ಸೂಚಿಸಿದರು. ಇದು ಇವರಿಗೆ ಮೊದಲ ಬಂಡವಾಳವಾಯಿತು.ನಂತರ ೨೦೧೪ ರಲ್ಲಿ ಪೋರ್ಚುಗೀಸ್ ರಾಷ್ಟ್ರೀಯತೆಯನ್ನು ಪಡೆದರು. == ವೃತ್ತಿ == ಇವರು ಚಲಚಿತ್ರದಲ್ಲಿ ನಟಿಸುವ ಮೊದಲು ಅರುಣಾ ಭಿಕ್ಶೂರವರಲ್ಲಿ ನಟನಾ ತರಬೇತಿ ಪಡೆದರು. ೨೦೦೬ರಲ್ಲಿ ಬಂದ ದೇವದಾಸು ತೆಲುಗು ಚಿತ್ರ ಇವರು ಅಭಿನಯಿಸಿದ ಮೊದಲ ಚಿತ್ರ.ನಂತರ ಪೊಕಿರಿ ಚಿತ್ರದಲ್ಲಿ ಏರೋಬಿಕ್ಸ್ ಶಿಕ್ಷಕಿಯಾಗಿ ನಟಿಸಿ ಭ್ರಷ್ಟ ಪೋಲೀಸ್ ಅಧಿಕಾರಿ ಇಂದ ಹಿಂಸೆ ಒಳ ಪಡುವ ಪಾತ್ರವನ್ನು ಅಭಿನಯಿಸಿದರು. ೨೦೦೬ರಲ್ಲಿ ಕೇಡಿ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು. ೨೦೧೨ ರಲ್ಲಿ ಅನುರಾಗ್ ಬಾಸು ನಿರ್ದೇಶಿಸಿದ ಬರ್ಫಿ ಚಿತ್ರದ ಮೂಲಖ ಬಾಲಿವುಡ್ಅನ್ನು ಪ್ರವೆಶಿಸಿದರು. ೨೦೧೪ ರಲ್ಲಿ ವರುನ್ ದವಣ್ ಹಾಗು ನರ್ಗಿಸ್ ಫಕ್ರಿಯೊಡಣೆ ಮೇ ತೆರಾ ಹೀರೊ ಚಲನಚಿತ್ರದಲ್ಲಿ ನಟಿಸಿದರು. ಈ ಚಿತ್ರ ಸೆಮಿ-ಹಿಟ್ ಚಿತ್ರ ಆಗಿತ್ತು. ೨೦೧೪ ನವೆಂಬರಿನಲ್ಲಿ ಸೈಫ್ ಅಲಿ ಖಾನ್ ರವರೊಡನೆ ಹ್ಯಾಪಿ ಎನ್ಡಿಂಗ್ ಚಿತ್ರದಲ್ಲಿ ನಟಿಸಿದರು. ೨ ವರ್ಷ ನಂತರ ಅಕ್ಷಯ್ ಕುಮಾರ್ ರವರೊಡನೆ ರುಸ್ತಮ್ ಚಿತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ವಾಪಾಸ್ ಬಂದರು. ಜುಲೈ ೨೦೧೭ ರಲ್ಲಿ ಅರ್ಜುನ್ ಕಪೂರ್ ಹಾಗು ಅನಿಲ್ ಕಪೂರ್ ರವರೊಡನೆ ಮುಬಾರಕಾನ್ ಚಿತ್ರದಲ್ಲಿ ಅಭಿನಯಿಸಿ ಸಕಾರಾತ್ಮಕ ವಿಮರ್ಶೆಯನ್ನು ಗಳಿಸಿದರು. ನಂತರ ಅಜಯ್ ದೇವ್ ಗನ್ ರವರೊಡನೆ ಬಾದ್ಶಾಹೊ ಚಿತ್ರದಲ್ಲಿ ನಟಿಸಿದರು.. == ಫಿಲ್ಮೋಗ್ರಾಫಿ == == ಪ್ರಶಸ್ತಿ == ೨೦೦೭-ದೇವದಾಸು ತೆಲುಗು ಚಲನಚಿತ್ರಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ೨೦೦೯ ಜಲ್ಸ ಚಲನಚಿತ್ರಕ್ಕೆ ಸಂತೊಷಂ ಚಲನಚಿತ್ರ ಪ್ರಶಸ್ತಿ ಹಾಗೂ ಸೌಥ್ ಸ್ಕೊಪ್ ಸ್ಟೈಲ್ ಪ್ರಶಸ್ತಿ ಲಭಿಸಿದೆ. ೨೦೧೨-ನಾನ್ಬನ್ ಚಲನಚಿತ್ರಕ್ಕೆ ವೋಗ್ ಬ್ಯುಟಿ ಪ್ರಶಸ್ತಿ ಹಾಗು ಇಟಿಸಿ ಬಾಲಿವುಡ್ ಪ್ರಶಸ್ತಿ ಸಿಕ್ಕಿದೆ. ೨೦೧೩-ಬರ್ಫಿ ಚಿತ್ರಕ್ಕೆ ಫಿಲ್ಮ್ಫೆರ್ ಪ್ರಶಸ್ತಿಯನ್ನು ಬಾಚಿದ್ದಾರೆ. ಇದರೊಡನೆ ಸ್ಟಾರ್ ಡಸ್ಟ್ ಪ್ರಶಸ್ತಿ, ಜೀ ಸಿನೆ ಪ್ರಸಸ್ತಿ, ಸ್ಕ್ರೀನ್ ಅವರ್ಡ್, ಸ್ಟಾರ್ ಗಿಲ್ಡ್ ಪ್ರಶಸ್ತಿ ಲಭಿಸಿದೆ. == ಉಲ್ಲೆಖ ==